googlebfaab40290066a19.html ETAGI DESIGN COLLABORATIVE

Sunday, 21 July 2013


ಕಟ್ಟಡ ವಿನ್ಯಾಸದಲ್ಲಿ ನೈಸರ್ಗಿಕ ಬೆಳಕಿನ ಬಳಕೆ

ವಾಸ್ತುಶಿಲ್ಪ ಮತ್ತು ಬೆಳಕು ಎಂಬೆರಡು ಪರಿಕಲ್ಪನೆಗಳು ಇತಿಹಾಸಕಾಲದಿಂದಲೂ ಪರಸ್ಪರ ಅವಲಂಬಿತವಾಗಿಯೇ ಇರುವುದನ್ನು ಕಾಣುತ್ತೇವೆ. ಈ ಸಂಬಂಧ ಹೊಸದೇನೂ ಅಲ್ಲ ಮತ್ತು ಹೊಸತಲೆಮಾರಿನ ಸ್ಥಪತಿಗಳು, ವಿನ್ಯಾಸಗಾರರು ಅದನ್ನು ನಿರ್ಲಕ್ಷ್ಯಿಸುವಂತಿಲ್ಲ .



ವಿದ್ಯುತ್ತಿನಂತಹ ಕೃತ್ರಿಮ ಬೆಳಕಿನ ಮೂಲಗಳು ಬಳಕೆಗೆ ಸಿಗದಿದ್ದ ಕಾರಣ, ಗೋಡೆ ಮತ್ತು ಮುಚ್ಚಿಗೆಗಳಿಂದ ಆವರಿಸಲ್ಪಡುವ ಜಾಗಗಳಲ್ಲಿ ನೈಸರ್ಗಿಕ ಬೆಳಕಿನ ಲಭ್ಯತೆಗಳಿಗೆ ಆದ್ಯತೆಯನ್ನಿತ್ತ   ಪ್ರಾಚೀನ ವಾಸ್ತುಶಿಲ್ಪಶಾಸ್ತ್ರದಲ್ಲಿ, ಸ್ಥಾಪತ್ಯ ಮತ್ತು ಬೆಳಕು ಇವೆರಡೂ ಪರಸ್ಪರ ಅಂತರ್ಗತವಾಗಿ ಹೆಜ್ಜೆಹಾಕಿವೆ. ಹೀಗಾಗಿ ವಾಸ್ತುಶಿಲ್ಪಶಾಸ್ತ್ರ ಎಂಬುದು ’ನಾಲ್ಕುಗೋಡೆ ಮತ್ತು ಒಂದು ಛಾವಣಿ’ ಎಂಬುದಕ್ಕಿಂದ ವಿಸ್ತೃತವಾದ ವಿಷಯವಾಗಿದೆ. ಅಂಗಣದ ಭೂಭಾಗದ ತಗ್ಗು ದಿಣ್ಣೆಗಳನ್ನು ಅನುಕೂಲಕ್ಕೆ ತಕ್ಕಂತೇ ಪರಿವರ್ತಿಸಿ, ಕಟ್ಟಡದೊಳಗೆ ಬೆಳಕಿನ ಹರಿವು ಹೆಚ್ಚುವಂತೇ ಮಾಡುವ ಮೂಲಕ ಅಲ್ಲಿನ ನಿವಾಸಿಗಳಿಗೆ ಪುಷ್ಕಳ ಬೆಳಕು ಲಭ್ಯವಾಗುವಂತೇ ನೋಡಿಕೊಳ್ಳುತ್ತಿದ್ದುದು ಅಂದಿನ ಸಂಪ್ರದಾಯ. ಉತ್ತಮ ಬೆಳಕಿನ ಪ್ರವಾಹ ಇರುವ ಕಟ್ಟಡಗಳಲ್ಲಿ ನಾವದನ್ನು ಹೆಚ್ಚಾಗಿ ಗಮನಿಸುವುದೇ ಇಲ್ಲ, ಆದರೂ ಬೆಳಕಿನಿಂದಾಗಿಯೇ ನಾವಲ್ಲಿ ಆಕರ್ಷಿತರಾಗಿರುತ್ತೇವೆ, ಅಲ್ಲಿಯೇ ಇರಲು ಇಷ್ಟಪಡುತ್ತೇವೆ.

ಹಿಂದೂ ಮತ್ತು ಇಸ್ಲಾಂ ವಾಸ್ತುಶಿಲ್ಪ ಶಾಸ್ತ್ರಗಳಲ್ಲಿ, ಅವರ ವಸಾಹತುಗಳುಳ್ಳ ಭೂಖಂಡದ ಕೆಲವು ಪೂಜಾ/ಪ್ರಾರ್ಥನಾ ಪ್ರದೇಶಗಳಲ್ಲಿ, ಬೆಳಕೆಂಬ ಮೂಲವಸ್ತುವಿನ ಬಳಕೆ ಹಲವೆಡೆಗಳಲ್ಲಿ ನಿಯಂತ್ರಣಕ್ಕೆ ಒಳಪಡುತ್ತಿತ್ತು. ವ್ಯವಸ್ಥಾಪನೆಗೊಳಪಟ್ಟ ಪ್ರದೇಶಗಳಲ್ಲಿ ಪದರಗಳನ್ನು ನಿರ್ಮಾಣಮಾಡುವ ಮೂಲಕ ಹೊರಜಗತ್ತಿನ ಗದ್ದಲ, ಧೂಳು ಮತ್ತು ಸುಡುವ ಬಿಸಿಲು ನೇರವಾಗಿ ಒಳಗೆ ಬರದಂತೇ ತಡೆಯಲಾಗುತ್ತಿತ್ತು. ಉದಾಹರಣೆಗೆ: ವಿಶೇಷ ದಿನಗಳಲ್ಲಿ ಸೇರುವ ಜನಸಂದಣಿಯನ್ನು ಗಣನೆಯಲ್ಲಿಟ್ಟುಕೊಂಡು,  ಪ್ರಮುಖ ಪೂಜಾಸ್ಥಳ ಮತ್ತು ಬರುವ ಜನರ ಅನುಕೂಲಕ್ಕಾಗಿ ನಿರ್ಮಿಸುವ ಸಭಾಗೃಹ ಇತ್ಯಾದಿಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಿಸಲಾಗುತ್ತಿತ್ತು. ಗರ್ಭಗುಡಿಗಳಲ್ಲಂತೂ ಸೂರ್ಯನ ಬೆಳಕು ಪ್ರವೇಶಿಸದೇ ಇರುವಂತಿದ್ದು, ಅಲ್ಲಿಯೇ ಉರಿಸಲ್ಪಡುವ ಎಣ್ಣೆಯ ದೀಪಗಳಿಂದ ಹೊಮ್ಮುವ ಬೆಳಕು ವಿಗ್ರಹಗಳ ದಿವ್ಯಪ್ರಭಾವಲಯಕ್ಕೆ ಇನ್ನಷ್ಟು ಮೆರುಗು ನೀಡುತ್ತಿದ್ದವು. ವಿನ್ಯಾಸ ಮತ್ತು ಬೆಳಕಿನ ವಿಶಿಷ್ಟ ಬಳಕೆಗಳು ಈಜಿಪ್ಟ್ ನಲ್ಲಿಯೂ ಕಂಡುಬಂದಿದ್ದು, ಅವರ ದೇವಾಲಯಗಳಲ್ಲಿರುವ  ಮಾನವ ಶರೀರಕ್ಕಿಂತ ದೊಡ್ಡದಾದ, ಬೃಹದಾಕಾರದ ವಿಗ್ರಹಗಳನ್ನು ದರ್ಶಿಸಲು ಇದೇ ಮಾದರಿಯ ವ್ಯವಸ್ಥೆ ಅಲ್ಲಿತ್ತು.   

ಗ್ರೀಕ್ ಮತ್ತು ರೋಮನ್ ವಾಸ್ತುವಿನ್ಯಾಸಗಳಲ್ಲಿ ಇದಕ್ಕಿಂತ ಭಿನ್ನವಾಗಿ, ರಕ್ಷಣೆ ನೀಡುವ ಬೆಳಕನ್ನು ಭಕ್ತಿ ಮತ್ತು ಧ್ಯಾನಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗಿದೆ. ಗೋತಿಕ್ ಶೈಲಿಯಲ್ಲಿ ಕಟ್ಟಲಾದ ಇಗರ್ಜಿಗಳಲ್ಲಿ, ಕಿಟಕಿಗಳ ಬಣ್ಣದ ಗಾಜುಗಳ ಮೇಲೆ ಬೆಳಕನ್ನು ಪ್ರವಹಿಸುವುದರ ಮೂಲಕ,ಇಗರ್ಜಿಯ ಒಳಗಿರುವವರಿಗೆ ಅತಿಮಾನುಷ ಶಕ್ತಿಯ ದಿವ್ಯಪ್ರಭೆಯನ್ನು ಕಂಡಂತಹ ಪ್ರಲೋಭನೆ ಉಂಟಾಗುವಂತೇ ಮಾಡಿದ್ದಾರೆ. ವಿಲಕ್ಷಣ ಮಾದರಿಯ ಕಟ್ಟಡಗಳು ಪ್ರಖರ ಬೆಳಕಿಗೆ ಆದ್ಯತೆ ನೀಡಿದ್ದರೆ, ಪುನರುಜ್ಜೀವನಗೊಂಡ ಕಟ್ಟಡಗಳಲ್ಲಿ ಮಾನವ ನಿರ್ಮಿತ ಬೆಳಕಿನಂತೇ ಬೆಳಕು ಪ್ರವಹಿಸುವಂತೆ ಯತ್ನಿಸಲಾಗಿದೆ.

ಆಧುನಿಕ ವಾಸ್ತುವಿನ್ಯಾಸ ಶಾಸ್ತ್ರದ ಇತಿಹಾಸದಲ್ಲಿ, ಲೀ ಕಾರ್ಬ್ಯೂಸಿಯರ್ ಎಂಬ ಫ್ರೆಂಚ್-ಸ್ವಿಸ್ ಆಧುನಿಕ ವಾಸ್ತುವಿನ್ಯಾಸತಜ್ಞ [ಚಂಡೀಗಡ ನಗರವನ್ನು ವಿನ್ಯಾಸಗೊಳಿಸಿದಾತ] ಹೇಳುತ್ತಾನೆ:    "ಬೆಳಕಿನಡಿಯಲ್ಲಿ ಬೃಹದ್ವಸ್ತುಗಳನ್ನು ಕಲೆಹಾಕಿಕೊಂಡು,  ತಿಳುವಳಿಕೆಯುಳ್ಳ-ಸರಿಯಾದ ಮತ್ತು ಭವ್ಯವಾದ ರೀತಿಯಲ್ಲಿ ಜೋಡಿಸುವ ಆಟವೇ ವಾಸ್ತುಶಿಲ್ಪಶಾಸ್ತ್ರ." ಆತ ನಿರ್ಮಿಸಿದ ಬಹುತೇಕ ಕಟ್ಟಡಗಳು ರಂಧ್ರಗಳನ್ನೂ ಮತ್ತು ತೆರೆದ ಭಾಗಗಳನ್ನೂ ಹೊಂದಿದ್ದು, ನೈಸರ್ಗಿಕ ಬೆಳಕನ್ನು ಒಳಗೆ ತರುವಲ್ಲಿ ಮತ್ತು ನಿಯಂತ್ರಿಸುವಲ್ಲಿ ನಿಖರವಾಗಿ ನಿರೂಪಿತವಾಗಿವೆ. ಜಗತ್ತಿನೆಲ್ಲೆಡೆ, ಜನರು ಸೂರ್ಯನ ಬೆಳಕನ್ನು ಲಕ್ಷ್ಯಿಸುವಲ್ಲಿ, ಬೆಳಕಿನ ಸಂಪರ್ಕವನ್ನು ಪಡಕೊಳ್ಳುವಲ್ಲಿ ಮತ್ತು ಬೆಳಕನ್ನು ನಿಯಂತ್ರಿಸುವಲ್ಲಿ, ಅಲ್ಲಲ್ಲಿನ ಪ್ರಾದೇಶಿಕತೆ ಅಥವಾ ವಾತಾವರಣಗಳೇ ಕಾರಣೀಭೂತವಾಗಿವೆ.

ತೀರಾ ಇತ್ತೀಚಿನವರೆಗೆ, ವಿಶೇಷವಾಗಿ ಭಾರತದ ಭೂಭಾಗದಲ್ಲಿ, ಹಲವು ವಾಸ್ತುವಿನ್ಯಾಸಗಾರರು ನೈಸರ್ಗಿಕವಾಗಿ ದೊರೆಯುವ ಬೆಳಕನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾದ ವಿನ್ಯಾಸಗಳನ್ನು ಮಾಡುತ್ತಿರಲಿಲ್ಲ. ವಾಸಯೋಗ್ಯ ಜಾಗಗಳನ್ನು ಸೃಷ್ಟಿಸುವುದಕ್ಕೆ ಸೂರ್ಯನ ಬೆಳಕು ಒಂದು ಉಪಕರಣದಂತಾಗಿದೆ. ಕಾಲದ ಕರೆಯಿರಬೇಕು; ಅಧುನಿಕತೆಯ ಬಹುಮುಖೀ ಒತ್ತಡಗಳಿಂದ  ಸಂಕಷ್ಟಕ್ಕೊಳಗಾದ ವಾಸ್ತುಶಿಲ್ಪಶಾಸ್ತ್ರದ ಕೊಡುಗೆ ಎನ್ನೋಣವೋ ಅಥವಾ ಸಂಸ್ಕೃತಿ ಮತ್ತು ವಾತಾವರಣವನ್ನು ಮರೆತ ರೀತಿಯೆನ್ನೋಣವೋ ಇಂದಿನ ವೃತ್ತಿನಿರತ  ವಾಸ್ತುವಿನ್ಯಾಸಗಾರರು ತಮ್ಮ ಅನೇಕ ಪ್ರಾಜೆಕ್ಟುಗಳಲ್ಲಿ, ನೈಸರ್ಗಿಕ ಬೆಳಕು ಒಂದು ಸೃಜನಾತ್ಮಕ ಮೂಲವಸ್ತು  ಎಂಬುದಕ್ಕೆ ಆದ್ಯತೆಯನ್ನೇ ನೀಡುತ್ತಿಲ್ಲ! ನೈಸರ್ಗಿಕ ಬೆಳಕಿನ ಮಹತ್ವವರಿಯದ ಕಕ್ಷಿದಾರರ ತೊಡಗಿಕೊಳ್ಳುವಿಕೆಯಿಂದ, ಮಾರುಕಟ್ಟೆಯ ಒತ್ತಡಗಳಿಗೆ ಮಣಿದು, ಬಂಡವಾಳಶಾಹಿಗಳಿಂದ ತಯಾರಿಸಲ್ಪಟ್ಟು-ಬಳಕೆ ಅನಿವಾರ್ಯವೆಂಬಷ್ಟು ಧಾರಾಳವಾಗಿ ಕೈಗಡವಾಗಿ ಸಿಗುವ ಕೃತಕ ವಸ್ತುಗಳ ಅತಿಯಾದ ಬಳಕೆಯಿಂದ, ಇಂದಿನ ಕಟ್ಟಡಗಳು ಒಳಗಿನಿಂದಲೂ ಹೊರಗಿನಿಂದಲೂ ನಿಸರ್ಗ-ವಿಧ್ವಂಸಕವಾದ ಹಾವಳಿಯನ್ನು ನಡೆಸುತ್ತಿವೆ. ಪರಿಶುದ್ಧ ಆಲೋಚನೆಗಳಿಲ್ಲದ್ದರ ಪರಿಣಾಮವಾಗಿ, ಬೇಕಾದಾಗಲೆಲ್ಲಾ ಬದಲಾಯಿಸುವ ನಿರ್ಮಾಣ ಯೋಜನೆಗಳಿಂದಾಗಿ, ನಿರ್ಮಿತಿವಸ್ತುಗಳ ದೂರಗ್ರಾಹಿತ್ವ ರಹಿತ ಬಳಕೆಯಿಂದಾಗಿ, [ವಿದ್ಯುತ್]ಶಕ್ತಿಯ ಬಳಕೆ ವಿಪರೀತ ಹೆಚ್ಚಿದೆ.  

ಉದಾಹರಣೆಗೆ ’ಮಾಲ್’ ಥರದ ಕಟ್ಟಡವನ್ನು ತೆಗೆದುಕೊಳ್ಳೋಣ. ಮುಂಬಾಗಿಲೊಂದನ್ನು ಬಿಟ್ಟು ಮಿಕ್ಕುಳಿತ ಎಲ್ಲಾಭಾಗಗಳಲ್ಲೂ ಗೋಡೆಗಳಿಂದ ಆವರಿಸಲ್ಪಟ್ಟ ಅಂತಹ ಕಟ್ಟಡಗಳಲ್ಲಿ, ವಿದೇಶೀ ಅನುಕರಣೆಯೆಂಬರೀತಿಯಲ್ಲಿ ಎಲ್ಲೆಲ್ಲೋ ಒಂದಷ್ಟು ಕಿಟಕಿ ಗಾಜುಗಳನ್ನು ಇಡಲಾಗುತ್ತದೆ; ಹೆಚ್ಚಿನ ಕಟ್ಟಡಗಳಲ್ಲಿ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನೆಡೆಗೇ ಗಾಜುಗಳು ಇಡಲ್ಪಡುವುದರಿಂದ, ಆ ಮೂಲಕ ಹರಿದು ಬರುವ ಸೂರ್ಯನ ಬೆಳಕು ಪ್ರಖರವಾಗಿದ್ದು-ಒಳಗಡೆಯ ಉಷ್ಣಾಂಶ ಹೆಚ್ಚಿ, ಸಾಧಾರಣವಾಗಿ ಬೇಕಾಗಬಹುದಾದ ಹವಾನಿಯಂತ್ರಣ ಸೌಲಭ್ಯಕ್ಕಿಂತ ಅಧಿಕಮಟ್ಟದ ಹವಾನಿಯಂತ್ರಕಗಳ ಅವಶ್ಯಕತೆ ಬೀಳುತ್ತದೆ. ಸಂಪೂರ್ಣವಾಗಿ ಗೋಡೆಗಳಿಂದಾವೃತವಾದ ಭಾಗಗಳು ಹೆಚ್ಚಿನ ವಿದ್ಯುದ್ದೀಪಗಳ ಮತ್ತು ಅಧಿಕ ಹವಾನಿಯಂತ್ರಕಗಳ ಅವಲಂಬನೆಯನ್ನು ಅರ್ಥೈಸಿದರೆ, ಈ ಸಲುವಾಗಿ ತಗಲುವ ಹೆಚ್ಚಿನ ವಿದ್ಯುತ್ತಿನ ತಯಾರಿ ಮತ್ತು ಸರಬರಾಜು ಕೆಲಸಗಳ ಅವಲಂಬನೆಯನ್ನು ಒಟ್ಟಾರೆ ವ್ಯವಸ್ಥೆ ಅರ್ಥೈಸುತ್ತದೆ. ಹವಾನಿಯಂತ್ರಕಗಳೂ ಮತ್ತೆಮತ್ತೆ ನಿಯಂತ್ರಿತ ಹವೆಯನ್ನೇ ಮರುಬಳಕೆ ಮಾಡುವುದರಿಂದ ಉಸಿರಾಟಯೋಗ್ಯ ಹವೆಯ ಪರಿಮಾಣ ಕಮ್ಮಿಯಾಗುತ್ತದೆ. ಇಂತಹ ಬೃಹನ್ಮಮಟ್ಟದ ವಿದ್ಯುತ್ ಬೇಡಿಕೆಯನ್ನು ನಾಡು ಭರಿಸಲಾಗದಾಗ, ಪೆಟ್ರೋಲಿಯಂ ಪದಾರ್ಥಗಳನ್ನು ಉಪಯೋಗಿಸಿ ಸ್ಥಳದಲ್ಲೇ ವಿದ್ಯುಜ್ಜನಕಗಳನ್ನು ಹಚ್ಚುವುದರ ಮೂಲಕ ತಮ್ಮ ಕೊರತೆಯನ್ನು ಮಾಲ್ ಗಳು ನೀಗಿಕೊಳ್ಳುತ್ತವೆ. ಇಲ್ಲಿ ಕಾರ್ಬನ್ ಬಿಡುಗಡೆಯಾಗುವುದರ ಜೊತೆಗೆ ಇದಕ್ಕೆ ತಗಲುವ ವೆಚ್ಚ ಕೂಡಾ ದುಬಾರಿಯಾಗಿರುತ್ತದೆ. ಬಾಡಿಗೆಗಳೂ ಬಹಳ ಹೆಚ್ಚಿನಮಟ್ಟದಲ್ಲಿದ್ದು ಅವುಗಳನ್ನೆಲ್ಲಾ ಬರುವ ಗಿರಾಕಿಗಳಿಗೆ ಪರೋಕ್ಷವಾಗಿ ವರ್ಗಾಯಿಸಲಾಗುತ್ತದೆ. ಇದನ್ನೆಲ್ಲಾ ನೋಡಿದರೆ, ಮಾಲ್ ಗಳು ಎಲ್ಲೋ ತಮ್ಮಪಾದಗಳಿಗೆ ತಾವೇ ಗುಂಡುಹೊಡೆದುಕೊಂಡು ನಡೆಸುವ ರೀತಿ ಭಾಸವಾಗುತ್ತದೆ. ಅಗತ್ಯಕ್ಕಿಂತಾ ಹೆಚ್ಚಾಗಿ ಗೋಡೆಗಳಿಂದ ಆವೃತವಾಗುವ ಮಾಲ್ ಗಳಲ್ಲಿ ಕೃತಕ ದೀಪಗಳನ್ನೇ ಬಳಸುವುದು ಉದ್ದೇಶ ಪೂರ್ವಕವಾಗಿದೆ; ಗಿರಾಕಿಗಳು ಒಳಗೆ ಬಂದಾಗ, ಹೊರಜಗತ್ತಿನ ಮತ್ತು ನೈಸರ್ಗಿಕ ಬೆಳಕಿನ ಸಂಪರ್ಕ ಕಡಿತಗೊಳ್ಳುವುದರಿಂದ, ಸಮಯದ ಪರಿವೆಯೇ ಇಲ್ಲದಂತೇ ಗಿರಾಕಿಗಳು ಮಾಲ್ ನಲ್ಲೇ ಓಡಾಡಿ ಖರೀದಿಸುತ್ತಿರುವಂತಾಗುತ್ತದೆ!

ಇದಕ್ಕೆ ಬದಲಾಗಿ,  ಕಟ್ಟಡವನ್ನೂ ಮತ್ತು ಅಲ್ಲಿ ಬಳಸಲ್ಪಡುವ ಸಾಮಗ್ರಿಗಳನ್ನೂ ಪರಿಪಕ್ವ ಕ್ರಮದಲ್ಲಿ ನಿಯೋಜಿಸಿದರೆ, ನಿಯಂತ್ರಿತ ನೈಸರ್ಗಿಕ ಬೆಳಕನ್ನು ಯಾವುದೇ ದುಷ್ಪರಿಣಾಮಗಳಿಲ್ಲದಂತೇ ಇಡೀ ಕಟ್ಟಡದೊಳಗೆ ಬಳಸಿಕೊಳ್ಳಬಹುದು. ಜಾಗಗಳನ್ನು ವಿಂಗಡಿಸುವುದರಿಂದ, ಅಡ್ಡಗಾಳಿ ಬೀಸಲು ಅನುಕೂಲವಾಗುವ ರೀತಿಯಲ್ಲಿ ಗೋಡೆಗಳ ನಿರ್ಮಿತಿಯನ್ನು ಮಾಡುವುದರಿಂದ ಕಟ್ಟಡದೊಳಗಿನ ತಾಪಮಾನ ತಡೆದುಕೊಳ್ಳಬಹುದಾದ ಮಟ್ಟದಲ್ಲಿರುವಂತೇ ಸಹಜವಾಗಿ ನಿಯಂತ್ರಿಸಬಹುದಾಗಿದೆ. ಇದು ಮಾಲ್ ಗಳ ವಿದ್ಯುತ್ ಶುಲ್ಕದಲ್ಲಿ ಕಡಿತವುಂಟುಮಾಡಲು ಪೂರಕವಾಗುತ್ತದೆ. ಮೇಲಾಗಿ ಹಲವಾರು ವಿದ್ಯುದ್ದುಪಕರಣಗಳ ಬಳಕೆ ಕಮ್ಮಿಯಾಗುವುದರಿಂದ ಹೆಚ್ಚಿನ ಸ್ಥಳಗಳನ್ನು ಬಾಡಿಗೆಗೆ ನೀಡಬಹುದಾದ ಅನುಕೂಲ ಒದಗಲಿದೆ.

ಇಂತಹ ಯುಕ್ತಿಯುಕ್ತ ಯೋಜನೆಗಳ ಆಯ್ಕೆ ವಾಸ್ತುವಿನ್ಯಾಸಗಾರರಿಗೆ ಸದಾ ದೊರೆಯುತ್ತದೆ ಮತ್ತು ಮನೆಗಳ ನಿರ್ಮಾಣಗಳಲ್ಲಿ ಕೂಡ ಅವರು ಇಂಥಾ ಯುಕ್ತಿಗಳನ್ನು ಬಳಸಿಕೊಳ್ಳಬಹುದಾಗಿದೆ. ಏರುತ್ತಿರುವ ಭೂಮಿಯ ದರ ಮತ್ತು ನಿರ್ಮಾಣವೆಚ್ಚಗಳಿಂದ ನಗರವಾಸಿಗಳು ಚಿಕ್ಕ ಚಿಕ್ಕ ನಿವೇಶನಗಳನ್ನು ಕೊಳ್ಳುವಂತಾಗಿದೆ. ಇಂಥಾ ಜಾಗಗಳನ್ನು ಕಂಡಾಗ, ವಾಸ್ತುವಿನ್ಯಾಸಗಾರನೊಬ್ಬ ತನ್ನ ಕಕ್ಷಿದಾರನ ಬಗ್ಗೆ ಮತ್ತು ಅಲ್ಲಿನ ನೆರೆಹೊರೆಯ ಜಾಗಗಳವರ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ; ಗಾಳಿ ಮತ್ತು ಬೆಳಕನ್ನು ನೀಡುವ ಸುತ್ತಲ ಜಾಗ ಸಾಕಷ್ಟಿಲ್ಲದಾದಾಗ ವಾಸ್ತುಶಿಲ್ಪಿ ಖೇದಗೊಳ್ಳುತ್ತಾನೆ. ಅಂತಹ ಸ್ಥಿತಿಯಲ್ಲಿ, ಒಳ್ಳೆಯ ಆಯ್ಕೆಯೆಂದರೆ ಆಗಸದತ್ತ ನೋಡುವುದು; ಆಗಸದ ತುಣುಕನ್ನು ಮನೆಯೊಳಗೆ ಇಳಿಸಿಕೊಳ್ಳುವುದಕ್ಕೆ ಯೋಜನೆ ರೂಪಿಸುವುದು!

ಆಕಾಶದೆಡೆಯಿಂದ ಸಿಗುವ ಬೆಳಕನ್ನು ಈ ಹಿಂದೆ ಎಲ್ಲೆಲ್ಲಾ ನಮ್ಮ ಯೋಜನೆಗಳಲ್ಲಿ ಅಳವಡಿಸಿದ್ದೇವೆಯೋ, ಅಲ್ಲಿ ವಾಸಿಸುತ್ತಿರುವ ಕಕ್ಷಿದಾರರು ಸಿಕ್ಕಾಗ, ತಾವು ತಡರಾತ್ರಿಯವರೆಗೂ ಕೃತ್ರಿಮ ಬೆಳಕನ್ನು ಬಳಸುವ ಅಗತ್ಯ ತಮಗೆ ಬರುವುದೇ ಇಲ್ಲ, ಈ ಕಾರಣದಿಂದ ಮನೆಯ ಅಂದ ಹೆಚ್ಚುವುದರ ಜೊತೆಗೆ ವಿದ್ಯುತ್ತಿನ ಬಳಕೆ ಮತ್ತು ಬಳಕೆಗೆ ತಗಲುವ ವೆಚ್ಚ ಕೂಡಾ ಕಮ್ಮಿಯಾಗಿದೆ ಎಂದು ಹೇಳುತ್ತಾರೆ. ಕಕ್ಷಿದಾರರೊಬ್ಬರ ಕಥೆಯಂತೂ ಹೃದಯ ಮುದಗೊಳಿಸುತ್ತದೆ: ಒಂದುರಾತ್ರಿ ಅವರ ಮಗು ರೋಧಿಸುತ್ತಿದ್ದಾಗ ಮನೆಯಲ್ಲಾಗಲೀ ಆ ಪ್ರದೇಶದಲ್ಲೇ ಆಗಲಿ ವಿದ್ಯುತ್ತು ಇರಲಿಲ್ಲ. ಎದ್ದು, ಅಡುಗೆಮನೆಗೆ ತೆರಳಿ, ಮಗುವಿಗೆ ಹಾಲುಮಾಡಿ ಕುಡಿಸಿ-ನಿದ್ದೆಗೆ ಜಾರಿಸಿ, ಗಂಡ-ಹೆಂಡತಿ ಬೆಳತನಕ ಹಾಯಾಗಿ ಮಾತನಾಡುತ್ತಾ ಕೂತುಬಿಟ್ಟರಂತೆ-ಅದು ಪಾರದರ್ಶಕ ಛಾವಣಿಯಿಂದ ಹಾದುಬಂದ ತಂಗದಿರನ ಬೆಳಕಿನಲ್ಲಿ!             

ಮುಕ್ತಾಯಗೊಳಿಸುವ ಮುನ್ನ, ಯಾವುದೇ ಹೋಲಿಕೆಯನ್ನೂ ಮಾಡದೇ, ವಿನಮ್ರನಾಗಿ, ಅಮೇರಿಕಾದ ಲೂಯಿಸ್ ಇಸಡೋರ್ ಖಾನ್ ಎಂಬ ಜಗದ್ವಿಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರನನ್ನು ನೆನೆಯುತ್ತೇನೆ. [ ಆತ ಜಗತ್ತಿನ ಹಲವೆಡೆಗಳಲ್ಲೂ, ನಮ್ಮ ಭೂಭಾಗದಲ್ಲಿ ಅದರಲ್ಲೂ ಅಹಮದಾಬಾದಿನಲ್ಲೂ ಅನೇಕ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದಾನೆ.] ಅವನ ಅರ್ಥಗ್ರಾಹ್ಯ ಸಾಮರ್ಥ್ಯ ಮತ್ತು ದಿನಬೆಳಕಿನ ಬಳಕೆಯ ವೈಖರಿ ಅವನ  ವಿನ್ಯಾಸಗಳಲ್ಲೆಲ್ಲಾ ಕಾಣಸಿಗುತ್ತವೆ; ಆಧುನಿಕ ವಾಸ್ತುಶಿಲ್ಪ ವಿನ್ಯಾಸಗಳ ಇತಿಹಾಸದಲ್ಲೇ ಅವು ಅನನ್ಯ ಮತ್ತು ಅನ್ಯಾದೃಶ. ಅವನು ಹೇಳುತ್ತಾನೆ:"ಕೊಠಡಿ ಕಟ್ಟುವುದಕ್ಕೂ ಮೊದಲು ಅದೆಷ್ಟು ಸುಂದರವಾಗಿರಬಹುದೆಂದು ಸೂರ್ಯನ ತಿಳುವಳಿಕೆಗೆ ಅದು ನಿಲುಕಲಿಲ್ಲ. ಮಾನವನೊಬ್ಬನ ಸೃಷ್ಟಿ-ಒಂದು ಕೋಣೆ, ಅದೊಂದು ಚಮತ್ಕಾರ, ಅದೊಂದು ಪವಾಡ, ಸ್ವಲ್ಪ ವಿಚಾರಮಾಡಿನೋಡಿ-ಒಬ್ಬ ಮನುಷ್ಯ ಸೂರ್ಯನ ಬಂದು ಭಾಗವನ್ನೇ ತನ್ನದಾಗಿಸಿಕೊಳ್ಳಬಲ್ಲ!"

ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದರನ್ನು ಈ ಮೂಲಕ ಸಂಪರ್ಕಿಸಬಹುದು: +91 9886124035 / Email: wip.code@gmail.com



Tuesday, 9 April 2013

“Home is where the heart is”


“Home is where the heart is”, is perhaps a saying that comes to many a people’s mind when they think of constructing a house.Approaching a professional expert in buildings, can add value to your house says Architect PrashanthNandiprasad. 

“An architect is an artist who follows his instincts guided by the insights of the Client”
What is it that people dream of when they think and want to build a house? When does a house… become a home? These are some of the basic questions that an architect of a house needs to work on when approached for his professional services.

Apart from budgetary considerations, the psyche of the owner who is getting the house built needs to be understood. The architect has to consider the clients’ spatial requirements, their likes & dislikes, what their spouse is looking for, (which can often surprisingly be very contrasting to the clients’ needs), specific views and sometimes wayward opinions of other family members (viz. children / elders / sometimes well-wishers /family friends etc.), while designing a house. The immense level of patience required to listen to the client is a quality that an architect ought to possess and nurture.

Sometimes it may be difficult for clients to express what they are looking for in a house. Trying to understand the thoughts and aspirations of the client is an art in itself, to say the least.  An experienced architect can read the client’s mind and assess what they are trying to communicate.  While drawing up the designs, (read drawings & sketches), the architect has to marry all these requirements, expressed or otherwise in a harmonious way, often within a specific budget. An architect is an artist who follows his instincts guided by the insights of the client.

When engaging in a project, architects also have their own agenda, their own likes / dislikes to certain form &styles.They can relate to certain taste they have acquired, to a certain language of expression they may have evolved or developed over the years, which they lend to the project. A completed building form expresses & communicates to the viewer in a certain visual manner. Often the architect would have foreseen this while conceiving the project for their client.

Clients need to understand that although they are approaching an architect to design their house, they are also entrusting and respecting a professional in rendering services they cannot have done themselves. And often the value addition an architect does to a client / project is manifold than the fees they have been paid for. An experienced architect can also advise or read legal documents / rent - lease agreements, prepare civil / budgetary project estimates for bank loans, draw up building sanction drawings based on the finalized design, know how building structural loads work while engagingwith a structural engineer, foresee / supervise a building construction &advice if the various civil elements are being executed with good construction practices, design a building with the interior / furniture layout in place, select building material & suggest their harmonious integrity with colours& textures from other surrounding material, select essential furnishing components (such as light fixtures / upholstery / furniture etc.), make an artistic visual statement with the overall shape / form & structure of the building etc.

Many a times,clientsare unaware of practical situations that might affect the construction of an ideal space. Architectsby virtue of their training & experience foresee such issues, (be in about the lifespan of materials / construction issues / client’s spatial requirements / current budgets / future expansion etc.), that can affect the outcome of the building process.Often in the process of drawing up the designs for a project, the architect exchanges ideas and educates the client about the design aspects, while sharing his thoughts on how the house should be. The concept of space, lighting (both natural & artificial), climate and nature etc., themselves play an integral part in influencing the sketch plans of a project. The architect represents his vision through these sketches and explains to the client through drawings, renderings etc.  The client on his part checks if these plans & designs are shaping up as per their requirements & needs. This often long drawn, back & forth process is known as the “Design Development” in the professional parlance. Any design based profession such as Product Design, Interior Design, Landscape Design, Furniture Design etc. is a patient,but a vastly rewarding experience to both the parties involved.

“My house should hug me when I walk in…”was apparently a statement my father-in-law said to his architect, when he was building his farm house many years ago. One can only appreciate an evolved client, who could have said such a statement to his architect.  And looking back at the completed house, one can appreciate how this intimacy with the built form, the architect has made it possible.

Ar. PrashanthNandiprasad can be contacted at +91 9886124035 / wip.code@gmail.com
Uddime Media Networks

"ಮನೆಯೆಲ್ಲೋ ಹೃದಯವೂ ಅಲ್ಲೇ ಇರುತ್ತದೆ "


"ಮನೆಯೆಲ್ಲೋ ಹೃದಯವೂ ಇರುತ್ತದೆ"-ಎಂಬ ಅನಿಸಿಕೆ ಮನೆ ಕಟ್ಟಿಸುವ ಅನೇಕರ ಅನುಭವಕ್ಕೆ ನಿಲುಕುತ್ತದೆ. ಕಟ್ಟಡ ನಿರ್ಮಾಣ ವೃತ್ತಿ ನಿಪುಣರನ್ನು ಭೇಟಿಯಾಗಿ ಸಲಹೆ ತೆಗೆದುಕೊಳ್ಳುವುದರಿಂದ, ಮನೆಯೆಂಬ ಕಟ್ಟಡಕ್ಕೊಂದು ವೈಶಿಷ್ಟ್ಯ ಲಭಿಸುತ್ತದೆ ಎನ್ನುತ್ತಾರೆ ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದ್.   

ಹದಿನೈದು ವರ್ಷಗಳ ಹಿಂದಿನ ಕಟ್ಟಡಗಳ ಸಾಲಿನಲ್ಲಿ ಹೊಸದಾಗಿ ನಿರ್ಮಿತವಾಗುತ್ತಿರುವ ಕಟ್ಟಡಗಳನ್ನು ಗಮನಿಸಿದಾಗ, ವಿನ್ಯಾಸಗಾರರ ನೈಪುಣ್ಯತೆಯನ್ನು ಕಾಣಬಹುದಾಗಿರುತ್ತದೆ; ಅವುಗಳಲ್ಲೂ ಕೆಲವು ಕಟ್ಟಡಗಳು ಮಾತ್ರ ತಮ್ಮ ವೈಶಿಷ್ಟ್ಯದಿಂದ ನೋಡುಗರನ್ನು ಕ್ಷಣಕಾಲ ನೋಡುತ್ತಲೇ ಇರುವಂತೇ ಆಕರ್ಷಿಸುತ್ತವೆ. "ಕಕ್ಷಿದಾರನ ಮನದಮೂಸೆಯಲ್ಲಿ ಉದ್ಭವಿಸುವ ಭಾವನೆಗಳಿಗೆ ವಿನ್ಯಾಸಗಳ ಮೂಲಕ ರೂಪುಗೊಡುವಾತ ಆರ್ಕಿಟೆಕ್ಟ್ ಅಥವಾ ವಿನ್ಯಾಸಗಾರನಾಗುತ್ತಾನೆ."

ಮನೆ ಕಟ್ಟುವವರು ವಿನ್ಯಾಸ ಸಲಹೆಗಳಿಗಾಗಿ ವಿನ್ಯಾಸಗಾರನನ್ನು ಭೇಟಿಮಾಡಿದಾಗ, ಮನೆಕಟ್ಟುವಾಗ ಜನರು ಮೊದಲು ಯಾವ ಕನಸುಗಳನ್ನು ಕಾಣತೊಡಗುತ್ತಾರೆ? ಮತ್ತು ಕಟ್ಟಡ ಎನ್ನುವುದು ಮನೆ ಎನ್ನಿಸಿಕೊಳ್ಳುವುದು ಯಾವಾಗ? ಎಂಬೀರೀತಿಯ ಹಲವು ಪ್ರಶ್ನೆಗಳ ಮೇಲೆ ವಿನ್ಯಾಸಗಾರ ಚಿಂತಿಸಬೇಕಾಗುತ್ತದೆ. ನಿರ್ಮಿತಿಯ ಖರ್ಚುವೆಚ್ಚಗಳ ಮುಂಗಡಪತ್ರದ ಗಣನೆಯ ಹೊರತಾಗಿ, ಮಾಲೀಕನಾಗುವವನ ಮನದಲ್ಲೇನಿದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಖುಲ್ಲಾಜಾಗದ ಲಭ್ಯತೆ, ಮಾಲೀಕರಾಗುವವರ ಇಷ್ಟಾನಿಷ್ಟಗಳು, ಪತಿ-ಪತ್ನಿಯರಲ್ಲಿ ಯಾರ್ಯಾರು ಏನೇನನ್ನು ಬಯಸುತ್ತಿದ್ದಾರೆ[ಕೆಲವೊಮ್ಮೆ ಪತಿಯ ಬಯಕೆಗಳು ಪತ್ನಿಗೆ ಇಷ್ಟವಾಗದೇ ಹೋಗಬಹುದು!]ಎಂಬ ಅಂಶ, ನಿರ್ದಿಷ್ಟ ದೃಷ್ಟಿಕೋನಗಳು, ಕುಟುಂಬದ ಮಿಕ್ಕುಳಿದ ಸದಸ್ಯರ ತರಾವರಿ ಅಭಿಪ್ರಾಯಗಳು, ಆಪ್ತ ಮಿತ್ರ-ಬಂಧು-ಬಳಗದ ಅಭಿಪ್ರಾಯಗಳು ಇವೆಲ್ಲವುಗಳನ್ನೂ ಒಟ್ಟಂದದಲ್ಲಿ ಮೇಳೈಸಿ, ವಿಶಿಷ್ಟವಾಗಿ ವಿನ್ಯಾಸಮಾಡಿಕೊಡುವುದು ವಿನ್ಯಾಸಗಾರನ ಜವಾಬ್ದಾರಿ. ಹೀಗೇ ಒಂದೇ ಕಟ್ಟಡಕ್ಕೆ ಸಂಬಂಧಿಸಿದಂತೇ ಒಬ್ಬ ಕಕ್ಷಿದಾರನ ಪರವಾಗಿ, ಹಲವು ಮುಖಗಳಿಂದ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸುವಾಗ, ವಿನ್ಯಾಸಗಾರನಿಗೆ ಅತಿಯಾದ ತಾಳ್ಮೆಯ ಅವಶ್ಯಕತೆಯಿರುತ್ತದೆ; ಮತ್ತು ಆ ವಿಷಯದಲ್ಲಿ ಆತ ನುರಿತ ವ್ಯಕ್ತಿಯಾಗಿರಬೇಕಾಗಿರುತ್ತದೆ.   

ಕೆಲವೊಮ್ಮೆ ಕಕ್ಷಿದಾರರಿಗೆ ತಾವು ತಮ್ಮ ಮನೆಯಲ್ಲಿ ಏನೆಲ್ಲಾ ಇರಬೇಕು ಮತ್ತು ಹೇಗೆ ಹೇಗೆ ಇರಬೇಕೆಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ, ಕಕ್ಷಿದಾರ ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ಅರ್ಥೈಸಿಕೊಳ್ಳುವುದು ಒಂದು ನೈಜ ಕಲೆಯಾಗಿರುತ್ತದೆ. ಕಕ್ಷಿದಾರರ ಮನದಲ್ಲಿಯ ಅನುಚ್ಚರಿತ ಭಾವಸೂಕ್ಷ್ಮಗಳನ್ನು  ದಕ್ಷ ವಿನ್ಯಾಸಗಾರ ಓದಿಕೊಳ್ಳಬಲ್ಲ! ಮತ್ತು "ನೀವು ಹೀಗೆ ಹೇಳಲು ಯತ್ನಿಸುತ್ತಿದ್ದೀರಿ ಅಲ್ಲವೇ?" ಎಂಬ ಪ್ರಶ್ನೆಯೊಂದಿಗೆ ಕಕ್ಷಿದಾರರು ನಡೆಸಬೇಕಾದ ಸಂವಹನ ಪ್ರಕ್ರಿಯೆಗೆ ಸಹಾಯಕನಾಗಬಲ್ಲ. ವಿನ್ಯಾಸಗೊಳಿಸುವ ಹಂತದಲ್ಲಿ ಆ ಎಲ್ಲಾ ಅಮೂರ್ತರೂಪದ ಬೇಡಿಕೆಗಳನ್ನೂ ಒತ್ತಟ್ಟಿಗೆ-ಸಂಗಾತಿಯೆಂಬಂತೇ ಮನದಲ್ಲೇ ಇಟ್ಟುಕೊಂಡು, ನಿಗದಿತ ಖರ್ಚುವೆಚ್ಚಗಳ ಪರಿಮಿತಿಯಲ್ಲಿ, ಕಕ್ಷಿದಾರನ ಮನಸ್ಸಿಗೆ ಸಂತಸವಾಗುವಂತೇ ವಿನ್ಯಾಸಗೊಳಿಸಿಕೊಡುವುದು ವಿನ್ಯಾಸಗಾರನ ಅನಿವಾರ್ಯತೆ. ಅದಕ್ಕೇ ಹೇಳುತ್ತೇವೆ:"ಕಕ್ಷಿದಾರನ ಮನದಮೂಸೆಯಲ್ಲಿ ಉದ್ಭವಿಸುವ ಭಾವನೆಗಳಿಗೆ ವಿನ್ಯಾಸಗಳ ಮೂಲಕ ರೂಪುಗೊಡುವಾತ ಆರ್ಕಿಟೆಕ್ಟ್ ಅಥವಾ ವಿನ್ಯಾಸಗಾರನಾಗುತ್ತಾನೆ." 

ಒಂದು ಯೋಜನೆ[ಪ್ರಾಜೆಕ್ಟ್]ಯನ್ನು ಕೈಗೆತ್ತಿಕೊಂಡಾಗ, ಕೆಲವು ರೂಪುರೇಷೆಗಳ/ಶೈಲಿಗಳ ಕುರಿತು ವಿನ್ಯಾಸಗಾರನಿಗೂ ಅವನದ್ದೇ ಆದ ಧೋರಣೆಗಳು, ಇಷ್ಟಾನಿಷ್ಟಗಳು ಇರುತ್ತವೆ. ಹಲವು ವರ್ಷಗಳ ತನ್ನ ಅನುಭವದ ಮೂಸೆಯಲ್ಲಿಂದ ವಿಶಿಷ್ಟ ಗುಣಾತ್ಮಕ ಅಂಶಗಳನ್ನು ಹೊರತೆಗೆದು, ಅದನ್ನಾತ ಬಳಸಿಕೊಳ್ಳುವುದರಿಂದ ನವನವ ವಿನ್ಯಾಸ ರೂಪುಗೊಳ್ಳುತ್ತದೆ. ನಿರ್ಮಾಣವಾಗಿ ನಿಂತ ಕಟ್ಟಡ ನೋಡುಗರೊಡನೆ ತನ್ನದೇ ಆದ ಮೂಕಭಾಷೆಯಲ್ಲಿ ಸಂವಹಿಸುತ್ತದೆ! ಕಕ್ಷಿದಾರನಿಗೆ ಯೋಜನೆ ರೂಪಿಸಿಕೊಡುವ ಕೆಲಸವನ್ನು ವಹಿಸಿಕೊಂಡ ಆ ಕ್ಷಣದಿಂದಲೇ, ಇಂಥಾದ್ದೊಂದು ಕಟ್ಟಡ ಹೀಗೇ ಬರಬೇಕೆಂಬ ಮೂರ್ತರೂಪದ ಪರಿಕಲ್ಪನೆ ವಿನ್ಯಾಸಗಾರನ ಮನದಲ್ಲಿ ಮೂಡಿರುತ್ತದೆ ಎಂಬುದನ್ನು ಗಮನಿಸಬೇಕು.    

ತಮ್ಮಿಂದಲೇ ಮಾಡಿಕೊಳ್ಳಲಾಗದ ವಿನ್ಯಾಸ ಸಲಹೆಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ನಿಯೋಜಿಸಿಕೊಂಡ ವಿನ್ಯಾಸಗಾರನನ್ನು ಕಕ್ಷಿದಾರರು ನಂಬುವ ಮತ್ತು ಗೌರವಿಸುವ ಸ್ವಭಾವವನ್ನು ಹೊಂದಿರಬೇಕಾಗುತ್ತದೆ. ನಿಯೋಜಿತ ವಿನ್ಯಾಸಗಳಲ್ಲಿ ನಡೆಯಬೇಕಾದ ಮೌಲ್ಯವರ್ಧನೆ ಹಲವು ಮಜಲುಗಳಲ್ಲಿ ನಡೆಯುವುದರಿಂದ, ತಾವು ಕೊಟ್ಟ ಶುಲ್ಕಕ್ಕಿಂತಾ ಹೆಚ್ಚಿನ ಮೌಲ್ಯ ವಿನ್ಯಾಸಗಾರನ ಕೆಲಸಕ್ಕಿದೆ ಎಂಬುದನ್ನು ಅವರು ಮನಗಾಣಬೇಕು. ವಿನ್ಯಾಸವನ್ನು ಚಿತ್ರಿಸುವುದರ ಜೊತೆಗೆ, ಕಟ್ಟಡ ಸಂಬಂಧೀ ಕಾನೂನುಬದ್ಧ ಬಾಡಿಗೆಯ ಅಥವಾ ಭೋಗ್ಯದ ಕರಾರುಪತ್ರಗಳನ್ನು ಓದುವುದು, ಆ ಕುರಿತು ಸಲಹೆ ನೀಡುವುದು, ಕಟ್ಟಡಗಳ ಕುರಿತಾದ ಸಾಲಸೌಲಭ್ಯಕ್ಕಾಗಿ ಖರ್ಚುವೆಚ್ಚಗಳ ಮುಂಗಡಪತ್ರವನ್ನು ತಯಾರಿಸಿಕೊಡುವುದು, ಅಂತಿಮವಾಗಿ ಒಪ್ಪಿತವಾದ ವಿನ್ಯಾಸವನ್ನವಲಂಬಿಸಿ ಕಟ್ಟಡಗಳ ಪರಿಪೂರ್ಣ ನಕ್ಷೆ ತಯಾರಿಸಿಕೊಡುವುದು, ಮಿಕ್ಕುಳಿದ ಅಭಿಯಂತರರ ಜೊತೆಗೆ ಸಹಕರಿಸಿ-ಕಟ್ಟಡದ ವಿವಿಧ ವಿಭಾಗಗಳಲ್ಲಿನ ಭಾರ ಸಮತೋಲನ ಮಾಪನ ನಡೆಸುವುದು, ಕಟ್ಟಡ ಕಾಮಗಾರಿಯ ಮುನ್ನೋಟ ಮತ್ತು ಸಾಂದರ್ಭಿಕ ಪರಿಶೀಲನೆ, ಉತ್ತಮವಾಗಿ ಕಟ್ಟುವ ವಿಧಾನಗಳಲ್ಲಿ ಕೆಲಸಗಳ ಪೂರ್ಣಗೊಳಿಸುವಿಕೆಗೆ ಸಲಹೆ, ಕಟ್ಟಡಗಳ ಒಳಾಂಗಣ ವಿನ್ಯಾಸ, ಅಲ್ಲಿನ ಪೀಠೋಪಕರಣಗಳ ವಿನ್ಯಾಸ-ತನ್ಮೂಲಕ ಕಟ್ಟಡದ ಮಿಕ್ಕುಳಿದ ವಿನ್ಯಾಸಗಳಿಗೆ ಅವು ತಾದಾತ್ಮ್ಯವಾಗಿ ಹೊಂದಾಣಿಕೆಯಾಗುವಂತೇ ಅವುಗಳ ಬಣ್ಣ, ಆಕಾರ, ಚಹರೆ, ಮತ್ತು ಕಟ್ಟಡದ ದೀಪಗಳ ವಿನ್ಯಾಸ, ಗೋಡೆಯ ಬಣ್ಣಗಳ ವಿನ್ಯಾಸ --ಹೀಗೇ ಹಲವು ಮಜಲುಗಳಲ್ಲಿ ವಿನ್ಯಾಸಗಾರ ಕೆಲಸ ನಿರ್ವಹಿಸಿ, ಕಟ್ಟಡವೊಂದು ವಿಶಿಷ್ಟ ಕಲಾತ್ಮಕ ಕಟ್ಟಡವಾಗಿ ಪರಿಪೂರ್ಣಗೊಳ್ಳಲು ಕಾರಣನಾಗುತ್ತಾನೆ.

ಬಹಳಸರ್ತಿ, ಉತ್ತಮ ಜಾಗವನ್ನು ನಿರ್ಮಿಸುವ ವೇಳೆಯಲ್ಲಿ, ಕಾರ್ಯಗತಗೊಳ್ಳುವ ನಿರ್ಧಾರಗಳು ಕಟ್ಟಡದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಕಕ್ಷಿದಾರರಿಗೆ ಗೊತ್ತಾಗುವುದೇ ಇಲ್ಲ. ಮುಂಬರುವ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕಟ್ಟಡದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೇ, ಕಟ್ಟಡಕ್ಕೆ ಬಳಸುವ ಸಾಮಗ್ರಿ, ಸಾಮಗ್ರಿಗಳ ತಾಳಿಕೆ-ಬಾಳಿಕೆ, ಕಟ್ಟಡಗಳ ಬಾಳಿಕೆ-ನಂತರದ ವರ್ಷಗಳಲ್ಲಿ ಅವುಗಳ ವಿಸ್ತರಣೆ ಮೊದಲಾದ ವಿಷಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುವ ಕೆಲಸವನ್ನು, ತಾನು ಪಡೆದ ತರಬೇತಿ ಮತ್ತು ಸ್ವಾನುಭವದಿಂದ ವಿನ್ಯಾಸಗಾರನೇ ನಡೆಸಿಕೊಡಬಹುದಾಗಿರುತ್ತದೆ. ವಿನ್ಯಾಸಗಳ ವಿವಿಧ ಹಂತಗಳಲ್ಲಿ ವಿನ್ಯಾಸಗಾರ ಕಕ್ಷಿದಾರನಿಗೆ ಪೂರಕ ಮಾಹಿತಿಗಳನ್ನೊದಗಿಸಿಕೊಡುವ ಮೂಲಕ ಮನೆ/ಕಟ್ಟಡ ಹೇಗಿರಬೇಕೆಂಬುದನ್ನು ತಿಳಿಸಿಕೊಡುತ್ತಾನೆ. ತನ್ನ ಮೂಲನಕ್ಷೆ ಮತ್ತು ಚಿತ್ರಗಳಿಂದ ಕಕ್ಷಿದಾರನಿಗೆ ಕಟ್ಟಡದ ಬಗ್ಗಿರುವ ತನ್ನ ನೋಟವನ್ನು ಮನವರಿಕೆ ಮಾಡಿಕೊಡುವುದು ವಿನ್ಯಾಸಗಾರನ ಕೆಲಸವಾದರೆ, ಪಡೆದ ಮಾಹಿತಿಗಳ ಮೂಲಕ, ನೋಡಿದ ನಕ್ಷೆಗಳ ಮೂಲಕ ವಿನ್ಯಾಸ ಒಪ್ಪಿತವೇ-ತನ್ನ ಮನದಿಚ್ಛೆಯಂತೇ ಬಂದಿದೆಯೇ ಎಂಬುದನ್ನು ಹೇಳುವುದು ಕಕ್ಷಿದಾರನ ಜವಾಬ್ದಾರಿಯಾಗಿರುತ್ತದೆ. ಹಿಂದಕ್ಕೂ ಮುಂದಕ್ಕೂ ಮಾರ್ಪಾಡುಗಳನ್ನು ಮಾಡುತ್ತಾ/ಪಡೆಯುತ್ತಾ ಮುಗಿಸುವ ವಿನ್ಯಾಸದ ಈ ವಿಧಾನವನ್ನು ’ಡಿಸೈನ್ ಡೆವಲಪ್ ಮೆಂಟ್’ ಅಥವಾ ’ವಿನ್ಯಾಸ ಪರಿಷ್ಕರಣೆ’ ಎಂದು ವೃತ್ತಿಮಾತಿನಲ್ಲಿ ಹೇಳುತ್ತಾರೆ. ವೃತ್ತಿ ನೈಪುಣ್ಯವನ್ನು ಬೇಡುವ ಪ್ರಾಡಕ್ಟ್ ಡಿಸೈನ್, ಇಂಟೀರಿಯರ್ ಡಿಸೈನ್, ಲ್ಯಾಂಡ್ ಸ್ಕೇಪ್ ಡಿಸೈನ್, ಫರ್ನಿಚರ್ ಡಿಸೈನ್ ಮೊದಲಾದವುಗಳೆಲ್ಲಾ ಸಹನೆಯಿಂದಲೂ ಮತ್ತು ಹೆಚ್ಚಿನ ನಿಗಾ ವಹಿಸಿಯೂ ಮಾಡಬೇಕಾದ ಕೆಲಸಗಳಾದರೂ, ದೀರ್ಘಕಾಲ ವಿನ್ಯಾಸಗಾರನಿಗೂ ಮತ್ತು ಕಕ್ಷಿದಾರನಿಗೂ ಖ್ಯಾತಿಯನ್ನು ತಂದುಕೊಡುವ ಅನುಭವಗಳಾಗಿರುತ್ತವೆ.

ಹಲವು ವರ್ಷಗಳ ಹಿಂದೆ ತನ್ನ ಕೃಷಿಭೂಮಿಯಲ್ಲಿ ಮನೆ ಕಟ್ಟಿಸುವಾಗ, "ಪ್ರವೇಶಿಸುತ್ತಿದ್ದಂತೆಯೇ ನನ್ನ ಮನೆ ನನ್ನನ್ನು ಅಪ್ಪಿಕೊಳ್ಳಬೇಕು"[“My house should hug me when I walk in…”] ಎಂಬ ಮಾತನ್ನು ನನ್ನ ಮಾವ ಅವರಮನೆಯ ವಿನ್ಯಾಸಗಾರನಲ್ಲಿ ಹೇಳಿದ್ದರು. ವಿಕಸಿತ ಮನದ ಕಕ್ಷಿದಾರರು ತಮ್ಮ ವಿನ್ಯಾಸಗಾರರಲ್ಲಿ ಹೇಳುವ ಇಂತಹ ಮಾತಿಗೆ ಅಂತಹ ಕಕ್ಷಿದಾರರನ್ನು ಯಾರೇ ಆದರೂ  ಶ್ಲಾಘಿಸಬಹುದು. ಈಗಲೂ ಆ ಕಟ್ಟಡವನ್ನು ನೋಡಿದರೆ, ವಿನ್ಯಾಸಗಾರ ಹೇಗೆ ಆ ಮಾತನ್ನು ಕಟ್ಟಡವನ್ನಾಗಿ ಪರಿವರ್ತಿಸಿದ ಎಂದು ತಿಳಿಯಬಹುದು!

ಅಂದಹಾಗೇ ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದ್ ಅವರನ್ನು ಈ ಮೂಲಕ ಸಂಪರ್ಕಿಸಬಹುದು : +91 9886124035 / wip.code@gmail.com